ಬೆಂಗಳೂರಲ್ಲಿ ಮಾತ್ರ ಇದು ಸಾಧ್ಯ!
Bangalored
ಕನಸಿನಲ್ಲಿ ಮಿಷೆಲ್ ಬಂದರೆ ಒಬಾಮಾ ಸಹಿಸಿಕೊಳ್ಳಬಹುದೇನೋ. ಆದರೆ ಈ ಪದ ಕೇಳಿಸಿಕೊಂಡಾಕ್ಷಣ ಮಾತ್ರ ಅಮೆರಿಕದ ಅಧ್ಯಕ್ಷ ನಿದ್ದೆಯಲ್ಲೂ ಬೆಚ್ಚಿಬಿದ್ದು ಎದ್ದುಬಿಡುತ್ತಾರೆ.. ಕಣ್ಣು ಬಿಟ್ಟರೆ ಕಾಣಿಸೋದು `ಬಫೆಲೋ'ದ ಕೆಂಪು ಕಣ್ಣು!
`ಬೆಂಗಳೂರು ಪಾಲಾಗುವುದು' ಎಂಬ ಅರ್ಥದ ಈ ಪದವನ್ನು ಮೊದಲಿಗೆ ಬಳಸಿದ್ದೇ ಅವರು. ಆದರೆ ಒಂದು ಸಂಗತಿ ಸ್ಪಷ್ಟ. ಈ ಪದ ಬರೇ ಅಮೆರಿಕದ ದುಸ್ವಪ್ನ ಎಂದು ನಾವೇನೂ ಸುಮ್ಮನಿರುವ ಹಾಗಿಲ್ಲ. ಯಾಕೆಂದರೆ, ಇಡೀ ಕರ್ನಾಟಕ ಇವತ್ತು Bangalored ಆಗಲು ಹೊರಟಿದೆ.
ಇಷ್ಟಕ್ಕೂ ಬೆಂಗಳೂರಲ್ಲೇನಿದೆ ಅಂಥ ಸ್ಪೆಷಾಲಿಟಿ? ಸೆಳೆತ? ನೀವೇನಾದರೂ ಕಂಡಿರಾ?
Bangalored
ಕನಸಿನಲ್ಲಿ ಮಿಷೆಲ್ ಬಂದರೆ ಒಬಾಮಾ ಸಹಿಸಿಕೊಳ್ಳಬಹುದೇನೋ. ಆದರೆ ಈ ಪದ ಕೇಳಿಸಿಕೊಂಡಾಕ್ಷಣ ಮಾತ್ರ ಅಮೆರಿಕದ ಅಧ್ಯಕ್ಷ ನಿದ್ದೆಯಲ್ಲೂ ಬೆಚ್ಚಿಬಿದ್ದು ಎದ್ದುಬಿಡುತ್ತಾರೆ.. ಕಣ್ಣು ಬಿಟ್ಟರೆ ಕಾಣಿಸೋದು `ಬಫೆಲೋ'ದ ಕೆಂಪು ಕಣ್ಣು!
`ಬೆಂಗಳೂರು ಪಾಲಾಗುವುದು' ಎಂಬ ಅರ್ಥದ ಈ ಪದವನ್ನು ಮೊದಲಿಗೆ ಬಳಸಿದ್ದೇ ಅವರು. ಆದರೆ ಒಂದು ಸಂಗತಿ ಸ್ಪಷ್ಟ. ಈ ಪದ ಬರೇ ಅಮೆರಿಕದ ದುಸ್ವಪ್ನ ಎಂದು ನಾವೇನೂ ಸುಮ್ಮನಿರುವ ಹಾಗಿಲ್ಲ. ಯಾಕೆಂದರೆ, ಇಡೀ ಕರ್ನಾಟಕ ಇವತ್ತು Bangalored ಆಗಲು ಹೊರಟಿದೆ.
ಈ ಬೆಂಗಳೂರು ಜತೆ ಸಂಬಂಧ ಹೊಂದಿಲ್ಲದ ಒಂದೇ ಒಂದು ಮಿಡ್ಲ್ಕ್ಲಾಸ್ ಫ್ಯಾಮಿಲಿ ಸಿಕ್ಕಿದರೆ ಹೇಳಿ (ಹಾಗೇನಾದರೂ ಇದ್ದರೆ ಅವರೇ ನಿಜವಾದ ದೇಸಿಗಳು). ಹಳ್ಳಿ ತೊರೆದು ಮಹಾನಗರಿ ಸೇರುವ ಮಕ್ಕಳನ್ನು ಇಡೀ ಕುಟುಂಬವೇ ಫಾಲೋ ಮಾಡುತ್ತಿದೆ. ಇವತ್ತು ರಾಜ್ಯದ ಶೇ 16ರಷ್ಟು ಜನ ಬೆಂಗಳೂರಲ್ಲೇ ಇದ್ದಾರೆ. ಒಟ್ಟು ಬೆಂಗಳೂರು ಜಿಲ್ಲೆಯ ಜನಸಂಖ್ಯೆ ಕೋಟಿಗೆ ಐದೇ ಲಕ್ಷ ಕಡಿಮೆ.
ಬಿಳಿಕೆರೆಯ ಮೋಹ ಬಿಟ್ಟು ವೈಟ್ಫೀಲ್ಡ್ಗೆ ದಾರಿ ಹುಡುಕಿದ ಈ ಜನರು ಉ`ದಾರಿ'ಕರಣದ ಶಿಶುಗಳೇ? ಅಲ್ಲಾ, ಗತಿ ಹುಡುಕಿ ಸಿಟಿ ಸೇರಿದ ಜಾ`ಗತೀ'ಕರಣದ ಕೂಸುಗಳೇ? ಹಳ್ಳಿಗಳಿಗಂತೂ ಈಗ ನಿಜವಾಗಿ ಲಿ`ಬರ'ಲೈಸೇಷನ್!ಇಷ್ಟಕ್ಕೂ ಬೆಂಗಳೂರಲ್ಲೇನಿದೆ ಅಂಥ ಸ್ಪೆಷಾಲಿಟಿ? ಸೆಳೆತ? ನೀವೇನಾದರೂ ಕಂಡಿರಾ?
ಎಲ್ಲೂ ಇಲ್ಲದ್ದು ಬೆಂಗಳೂರಲ್ಲಿ ಏನಿದೆ ಅಂತೀರಾ?...
![]() |
ಇದು ಚಾಣಕ್ಯ ಅವರು ತೆಗೆದ ಫೊಟೋ. ಅವರ ಹೆಚ್ಚಿನ ಚಿತ್ರಗಳಿಗೆ http://chanakachanakya.blogspot.com ಬ್ಲಾಗ್ ನೋಡಿ |
- ಎಲ್ಲ ಊರಲ್ಲಿ ನೀರಿಗೆ ಬಂದ ನೀರೆಯರೆಲ್ಲ ಜತೆ ಸೇರಿ ಹರಟೆ ಹೊಡದರೆ ಬೆಂಗಳೂರಲ್ಲಿ ಕಾರ್ಪೊರೇಷನ್ ಕಸದ ಗಾಡಿ ಬರುವಾಗ ಎಲ್ಲ ಗೃಹಿಣಿಯರು ಸೇರಿ ಡಿಸ್`ಕಸ' ಮಾಡುತ್ತಾರೆ.
- ಎಲ್ಲ ಕಡೆ ಫುಟ್ಪಾತ್ನಲ್ಲಿ ಜನ ನಡೆದರೆ ಬೆಂಗಳೂರಲ್ಲಿ ಟೂ ವೀಲರ್ಗಳು ಓಡಾಡುತ್ತವೆ
- ಬೇರೆ ಊರಲ್ಲಿ ಮಾಜಿ ಪ್ರಧಾನಿಗಳ ಹೆಸರಲ್ಲಿ ರೋಡ್, ಪ್ರತಿಮೆ ಇದ್ದರೆ ಇಲ್ಲಿ ಪೆಟ್ರೋಲ್ ಬಂಕ್ ಇದೆ.
- ದಿನವೂ ಕಂಡರೂ ಒಮ್ಮೆಯೂ ನಗದ ನೇಬರ್ ಮದುವೆಗೆ ನಗುನಗುತ್ತಲೇ ಇನ್ವಿಟೇಷನ್ ಕೊಡುತ್ತಾರೆ- ಅದರಲ್ಲಿ `ನಿಮ್ಮ ಹೆಸರು ನಮ್ಮ ಮನದಲ್ಲಿ ಹಸಿರಾಗಿದೆ' ಎಂದು ಬರೆದಿರುತ್ತಾರೆ.
- ಮನೆಯಲ್ಲಿ ಜ್ವರ ಬಂದಾಗ ಮಾತ್ರ ಬ್ರೆಡ್ ತಿನ್ನುವ ಐಟಿ ಹುಡುಗ ಆಫೀಸ್ ಕ್ಯಾಂಟೀನ್ನಲ್ಲಿ ಚಪ್ಪರಿಸಿಕೊಂಡು ಸ್ಯಾಂಡ್ವಿಚ್ ತಿನ್ನುತ್ತಾನೆ.
- ಬೇರೆ ಊರಲ್ಲಿ ಚರಂಡಿಯಲ್ಲಿ ಕಸ ಹರಿದುಹೋದರೆ, ಬೆಂಗಳೂರಲ್ಲಿ ಮಕ್ಕಳೇ ಕೊಚ್ಚಿ ಹೋಗುತ್ತವೆ.
- ಬೆಂಗಳೂರು ವೆದರ್ ಒಂಥರಾ ಹುಡುಗಿಯರ ಮೂಡ್ ಇದ್ದ ಹಾಗೆ. ಈಗ ಮಳೆ ಇದ್ದರೆ, ಅರ್ಧ ಗಂಟೆಯಲ್ಲಿ ಬಿಸಿಲು ಬರುತ್ತದೆ.
- ಬೇರೆ ಸಿಟೀನಲ್ಲಿ ಬಸ್, ರೈಲಿನಲ್ಲಿ ರಷ್ ಇದ್ದರೆ, ಇಲ್ಲಿ ರೋಡಲ್ಲೇ ನೂಕುನುಗ್ಗಲು
- ಗ್ರೀನ್ ಸಿಟಿ ಎಂಬ ಹೆಸರು ಪಡೆದ ಬೆಂಗಳೂರಲ್ಲಿ ಎಲ್ಲಿ ನೋಡಿದರಲ್ಲಿ ಹಸಿರು- ಆಟೋಗಳು.
- ಬೇರೆ ಊರಲ್ಲಿ ಆಂಬುಲೆನ್ಸ್ಗೆ ಜನ ದಾರಿ ಮಾಡಿಕೊಟ್ಟರೆ ನಮ್ಮೂರಲ್ಲಿ ಆಂಬುಲೆನ್ಸ್ ಹಿಂದೆಯೇ ಹೋಗುತ್ತಾರೆ.
- ಎಲ್ಲ ಸಿಟಿಗೆ ಒಂದೇ ಹೆಸರು. ನಮ್ಮಲ್ಲಿ ಸರ್ಕಾರಕ್ಕೆ ಇದು Bangalore ಖಾಸಗಿ ಕಂಪೆನಿಗಳಿಗೆ Bengaluru
- ಬೆಂಗಳೂರು ಮಂದಿ ಎದ್ದ ಹಾಗೆ ಪೇಪರ್ ನೋಡೋದು- ಇವತು ್ತಕರೆಂಟ್, ನೀರಿದ್ಯಾ ಅಂತ ತಿಳಿಯೋಕೆ.
- 20x30 ಅಡಿ ಜಾಗದ ಮನೆಗೆ ಇಲ್ಲಿ ತ್ರಿಬಲ್ ಬೆಡ್ರೂಮ್ ಎನ್ನುತ್ತಾರೆ
- ಸ್ಕೂಲಲ್ಲಿ ಮೈದಾನವೇ ಇಲ್ಲದ ಮಕ್ಕಳು ಸಂಜೆಯ ಹೊತ್ತು ಸೈಬರ್ ಕೆಫೆನಲ್ಲಿ ಗೇಮ್ಸ್ `ನೆಟ್ ಪ್ರಾಕ್ಟೀಸ್' ಮಾಡುತ್ತಿರುತ್ತಾರೆ.
- ಮೆಟ್ರೊ ರೈಲು ಆರಂಭದ ದಿನವನ್ನು ಮುಖ್ಯಮಂತ್ರಿ ಪ್ರಕಟಿಸುತ್ತಾರೆ. ಹದಿನೈದು ದಿನ ಕಳೆದ ನಂತರ ಇನ್ನೊಂದು ದಿನವನ್ನೂ ಪ್ರಕಟಿಸುತ್ತಾರೆ.
- ಬೇರೆ ಊರಿನ ಪಾರ್ಕಿನಲ್ಲಿ ಪ್ರೇಮಿಗಳು, ಕಾಫಿ ಅಂಗಡಿಯಲ್ಲಿ ಸೋಮಾರಿಗಳು ಕೂತಿರುತ್ತಾರೆ. ಬೆಂಗಳೂರಲ್ಲಿ ಪಾರ್ಕಿನಲ್ಲಿ ಸೋಮಾರಿಗಳು ಮಲಗಿದರೆ, ಕೆಫೆ ಕಾಫಿನಲ್ಲಿ ಪ್ರೇಮಿಗಳು ಕೂತಿರುತ್ತಾರೆ.
- ಅಲ್ಲಿ ಮರದ ಕೆಳಗೆ ವೆಹಿಕಲ್ ಪಾರ್ಕ್ ಮಾಡಿದರೆ, ಇಲ್ಲಿ ಮನೆ ಮುಂದೆ ವೆಹಿಕಲ್ ಪಾರ್ಕ್ ಮಾಡಲು ಮರ ಕಡಿಯುತ್ತಾರೆ.
- ಬೇರೆ ಊರಲ್ಲಿ ಸ್ಕೂಲಿನಿಂದ ಬರುವ ಮಕ್ಕಳನ್ನು ಅಮ್ಮ ಕಾದರೆ, ಬೆಂಗಳೂರಲ್ಲಿ ಆಫೀಸಿನಿಂದ ತಡವಾಗಿ ಬರುವ ಅಪ್ಪ-ಅಮ್ಮನನ್ನು ಮಕ್ಕಳು ಕಾಯುತ್ತವೆ.
- ಇಲ್ಲಿ ಮೂತ್ರ ಮಾಡಬಾರದು ಎಂಬ ಬೋರ್ಡ್ ನೋಡಿದ ಕೂಡಲೇ ಬೆಂಗಳೂರು ಜನಕ್ಕೆ ನೆನಪಿಗೆ ಬರುವುದು ಮೂತ್ರವೇ.
- ಬೆಂಗಳೂರು ಜನ ಶ್ರೀಮಂತರು. ಏಕೆಂದರೆ, ಪೆಟ್ರೊಲ್ಗೆ ಮೂರು ರೂಪಾಯಿ ಜಾಸ್ತಿ ಕೊಡುತ್ತಾರೆ.
(ಇದು ವಿಜಯnext ನಲ್ಲಿ ಪ್ರಕಟವಾದ ಬರಹ)